ಉಷ್ಣವಲಯದಲ್ಲಿ ತಲೆದೋರುವ ಒಂದು ಆವರ್ತಮಾರುತದ (ನೋಡಿ) ಹೆಸರು (ಹರಿಕೇನ್). ಸಾಮಾನ್ಯವಾಗಿ ಇದರ ಬೀಸುವೇಗ ಗಂಟೆಗೆ 121ಕಿ.ಮೀ ಗಳಿಗಿಂತ ಅಧಿಕವಾಗಿರುತ್ತದೆ. ಚಂಡಮಾರುತದ ಶ್ರಾಯ ಹೆಚ್ಚುಕಡಿಮೆ ಜೂನಿನಿಂದ ಅಕ್ಟೋಬರ್ ವರೆಗೆ. ಇದರ ಅತಿ ತೀವ್ರವಾದ ಸುಳಿ (ವೋರ್ಟೆಕ್ಸ್) ಮತ್ತು ಸಂವಾದೀ ಸಂಮರ್ದ ಓಟದ (ಪ್ರೆಷರ್ ಗ್ರೇಡಿಯಂಟ್) ಪರಿಣಾಮವಾಗಿ ಪ್ರಬಲ ಮಾರುತಗಳು ಉಂಟಾಗುತ್ತವೆ. ಉತ್ತರಾರ್ಧವಲಯದಲ್ಲಿ ಇವು ಅಪ್ರದಕ್ಷಿಣವಾಗಿಯೂ ದಕ್ಷಿಣಾರ್ಧ ವಲಯದಲ್ಲಿ ಪ್ರದಕ್ಷಿಣವಾಗಿಯೂ ಬೀಸುತ್ತವೆ. 	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ